ಬಡ ಜೀವಕೆ ಆಸರೆಯಾದರೆ ಅದು ನಿನ್ನಯ ಉತ್ತಮತೆ...
ಅಂಧಜಗಕೆ ಧ್ರುವತಾರೆ ನೀನಾದರೆ ಅದು ನಿನ್ನಯ ವೈಶಿಷ್ಟ್ಯತೆ...
ಬಿಸಿಲ ಬೇಗೆಯ ದಾಹ ತಣಿಸೋ ಪಾನಕ ನೀನಾದರೆ ಅದು ನಿನ್ನಯ ಕೃತಜ್ಞತೆ...
ಕಪ್ಪು ಬಿಳುಪಿನ ಪರಿವಿಲ್ಲದೆ ಬೆಸೆಯೋ ಸ್ನೇಹದ ಬಾಂಧವ್ಯ ನೀನಾದಾರೆ ಅದು ನಿನ್ನಯ ಆತ್ಮೀಯತೆ...
ಪ್ರತಿ ಸೋಲಿನಲ್ಲೂ ಗೆಲುವಿನ ಪಾಠ ನೀನಾದರೇ ಅದು ನಿನ್ನಯ ದೃಢತೆ...
ಬರಡು ನೆಲಕೆ ನೀರುನಿಸೋ ಜಲಧಾರೆ ನೀನಾದರೆ ಅದು ನಿನ್ನಯ ಗಣ್ಯತೆ...
ಜನ ದೇವರನ್ನು ನಿನ್ನಲ್ಲಿ ಕಾಣುವರೆಂದರೆ ಅದು ನಿನ್ನಯ ಆಧ್ಯಾತ್ಮತೆ...
-ಪ್ರಿಯ ದೇವಾಡಿಗ
ನಾರಾವಿ.











