ಕದಂಬ ಸಂಚಿಕೆ-೧

ಮಾರ್ಚ್ 31ರಂದು ‘ಕದಂಬ’ ಮಾಸಪತ್ರಿಕೆ ತನ್ನ ಯಶಸ್ವಿ ಪ್ರಯಾಣದ ಎರಡು ವರ್ಷಗಳನ್ನು ಪೂರೈಸಿದೆ.

ಈ ಹಾದಿಯಲ್ಲಿ ನಮಗೆ ಸದಾ ಬೆಂಬಲ ನೀಡಿದ ಓದುಗರಿಗೆ, ಬರಹಗಾರರಿಗೆ ಹಾಗೂ ಜಾಹಿರಾತುದಾರರಿಗೆ ನಾವು ಮನಃಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸುತ್ತೇವೆ.

ಕೇವಲ ಮುದ್ರಣ ಮಾಧ್ಯಮದಲ್ಲಿ ಆರಂಭವಾದ ‘ಕದಂಬ’, ಕಳೆದ ಜುಲೈ ತಿಂಗಳಿಂದ ವೆಬ್‌ಸೈಟ್‌ನಲ್ಲೂ ಲಭ್ಯವಿದ್ದು, ಇದೀಗ ಡಿಜಿಟಲ್ ಆವೃತ್ತಿಯನ್ನೂ ಪ್ರಾರಂಭಿಸುತ್ತಿದ್ದೇವೆ. ಇದರಿಂದ ಓದುಗರ ವ್ಯಾಪ್ತಿ ಇನ್ನಷ್ಟು ವಿಸ್ತಾರವಾಗುತ್ತದೆ ಎಂಬ ನಂಬಿಕೆಯಿದೆ.

ಇದುವರೆಗೆ ನೀವು ನಮಗೆ ನೀಡಿದ ಪ್ರೀತಿ, ಸಲಹೆ ಮತ್ತು ಸಹಕಾರ ಸದಾನಮ್ಮೊಂದಿಗೆ ಇರುತ್ತದೆ ಎದು ನಂಬಿದ್ದೇವೆ.

 

-ಗ್ಲೇನ್ ಗುಂಪಲಾಜೆ
  ಸಂಪಾದಕ
  ಕದಂಬ ಮಾಸಪತ್ರಿಕೆ

 

 

ಇನ್ನಷ್ಟು ತಿಳಿಯಿರಿ