ಶುಭ ಕಾಲ ಈ ಕಾಲ ಯಾವ ಕಾಲ
ರಾಹುಕಾಲ ಯಮಗಂಡಕಾಲ
ಗುಳಿಕಾಲ
ಸಾಯುವನಿಗೇ ಗೊತ್ತಾ
ಯಾವ ಕಾಲ
ಹುಟ್ಟು ಮಗುವಿಗೆ ತಿಳಿದಿತ್ತ
ಈ ಕಾಲ
ಎಲ್ಲಾವು ನಮ್ಮ ಕಾಲ...
ಆ ವಾರ ಈ ವಾರ ಯಾವ ವಾರ
ಹಣ ಕೊಡುವುದಕ್ಕೇ ಈ ವಾರ
ಶುಭ ಅಶುಭಕ್ಕೇ ಯಾವ ವಾರ
ಜೀವನವು ಹೀಗೆ
ನಾವು ನಡೆಯುವುದು ಹಾಗೆ
ದಿನ ಕಾಲ ಬದಲಾಗಲ್ಲಿಲ್ಲ
ಈ ಬದಲಾವಣೆಗೆ ನಾವೇ ಕಾರಣ
ಸುಳ್ಳುಗೆ ಇದೆ ಬೆಲೆ ಸತ್ಯಕ್ಕೆ ಇಲ್ಲ ನೆಲೆ
ಬಣ್ಣ ಬಣ್ಣದ ಮಾತಿಗೆ ಬೆಲೆ ಜಾಸ್ತಿ
ನಾ ಹೀಗೆ ಇರುವೇ ಸತ್ಯವೇ ಹೇಳುವೇ
ನನ್ನ ಜೀವನವೇ ಹೀಗೆ
ಈ ಮನುಷ್ಯನಿಗೆ ಗೌರವ ಮರ್ಯಾದೆನೇ ಇಲ್ಲವೆ..
-ವಿ.ಎಂ.ಎಸ್.ಗೋಪಿ
ಲೇಖಕರು
ಬೆಂಗಳೂರು.











