ಆರಕ್ಷಕ ಎಂಬ ಅಚ್ಚ ಕನ್ನಡದ ಪದಕ್ಕಿಂತಲು ಪೋಲೀಸ್ ಎಂಬ ಆಂಗ್ಲ ಪದವೇ ಜನರಿಗೆ ಪರಿಣಾಮಕಾರಿ ಅಲ್ಲವೆ ? ಈ ಪದವನ್ನು ಕೇಳಿದ ತಕ್ಷ್ನಣ ಭಯ ಆತಂಕ ಸಿಟ್ಟು ಆವಾಚ್ಯ ಪದಗಳಿಂದ ನಿಂದಿಸುವುದು ಸಾಮಾನ್ಯ . ಅಯ್ಯೋ ಆ ಪೋಲೀಸ್ ಬುದ್ದಿ ನಂಗೆ ಗೊತ್ತಿಲ್ವ? ಎಂಬ ವೆಂಗ್ಯ ಮಾತುಗಲನ್ನು ನಾವು ಕೇಳಿರುವುದು ಆಡಿರುವುದು ಸತ್ಯ ಸಹಜವೆ? ಆದರೆ ಪೋಲೀಸರ ನಿಜವಾದ ಪರಿಸ್ಥಿತಿ ಜೀವನ ಶೈಲಿ ನನಗೆ ತಿಳೀದಿದ್ದು ಧರ್ಮಸ್ಥಳ ಠಾಣೆಯ ಎಸ್ ಐ ಅನಿಲ್ ಕುಮಾರ್ ಡಿ ಅವರನ್ನು ಸಂದರ್ಶಿಸಿದ ಮೆಲೆಯೇ ನಾನು ಆಲಿಸಿದ ಪೋಲಿಸರ ನೋವು ನಲಿವೂ ಕೇಲವು ಹಾಸ್ಯ ಪ್ರಸಂಗಗಳನ್ನು ನಾಗರಿಕರಿಗೆ ತಿಳಿಸದೆ ಇದ್ದರೆ ಪತ್ರಿಕೊದ್ಯಮ ಅಧ್ಯಯನ ಮಡುತ್ತಿರುವ ನನಗೆ ತ್ಪೃಪ್ತಿ ಸಿಗದು.
ಮುಖ್ಯವಾಗಿ ಕಾನೂನಿನಲ್ಲಿ 'ಸಿವಿಲ್' ಮತ್ತು 'ಕ್ರಿಮಿನಲ್' ಎಂಬ ಎರಡು ರೀತಿಯ ಕೇಸ್ ಗಳಿದ್ದು ಪೋಲಿಸ್ ಇಲಾಖೆಗೆ 'ಕ್ರಿಮಿನಲ್' ಕೇಸ್ ಗಳಲ್ಲಿ ಮಾತ್ರ ಭಾಗವಹಿಸ ಬಹುದು ಆದರೆ ಅತೀ ಬುದ್ದಿವಂತ ಜನರು ತಮ್ಮ ನಿತ್ಯ ಜೀವನದ ಆಂತರಿಕ ವಿಷಯಗಳಲ್ಲಿ ನಾವು ಮೂಗು ತೂರಿಸುವಂತೆ ಮಾಡಿ ವಯಕ್ತಿಕ ದ್ವೇಷದ ಬೇಳೆಗಳನ್ನು ಬೇಯಿಸಿಕೊಂಡು ಹಗೆತನವನ್ನು ಸಾಧಿಸುತ್ತಾರೆ.
ಕಾನೂನಿನ ದುರಪಯೋಗ :
ಕಂದಾಯ ಇಲಾಖೆಯ ಸುರ್ಪದಿಗೆ ಬರುವ ಜಾಗದ ವಿಷಯಗಳನ್ನು ಪೋಲಿಸ ಠಾಣೆಗೆ ಬಂದು ದೂರು ನೀಡುತ್ತಾರೆ ನಮಗೆ ಸಂಬಂಧ ಪಟ್ಟ
ವಿಷಯವಲ್ಲ ಎಂದರೆ ಪಕ್ಕದ ಗದ್ದೆ ಅಥವಾ ಜಾಗದವರು ನನಗೆ ಅವಾಚ್ಯ ಪದಗಳಿಂದ ನಿಂದಿಸಿದರು ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದರು ಎಂದು ದೂರನ್ನು ದಾಖಲೀಸಿ ಕಾನೂನಿನ ದುರಪಯೋಗ ಮಾಡುತ್ತಾರೆ ಮುಂದಿನ ಕ್ರಮಗಳನ್ನು ಕೈಗೊಳ್ಳದಿದ್ದರೆ ಕರ್ತವ್ಯ ಲೋಪದ ಆರೋಪ ಹೂಡುತ್ತಾರೆ ಇಂತಹ ಸಂದರ್ಭದಲ್ಲಿ ನಮಗೆ ಬಿಸಿ ತುಪ್ಪ ಬಾಯಿಯಲ್ಲಿ ಇದ್ದ ಅನುಭವ.…
ಹಸು ಹಾಲು ಕೊಡದಿದ್ದರೆ ಪೊಲೀಸರು ಹೊಣೆಯೇ?
ಹೀಗೆ ಕೆಲವು ದಿನಗಳ ಹಿಂದೆ ಶಿಬಾಜೆ ಗ್ರಾಮದ ಒಂದು ಹೆಣ್ಣುಮಗಳು ನಮ್ಮ ಹಸು ಸರಿಯಾಗಿ ಹಾಲು ಕೊಡುತ್ತಿಲ್ಲ ಪಕ್ಕದ ಮನೆಯ ಹೆಂಗಸು ಹಸುವಿಗಿಂತ ಜೋರಾಗಿ ಹಾಲು ಕರೆಯುವಾಗ ಬೊಬ್ಬಡುತ್ತಲೆ ನಮ್ಮ ಹಸು ಪಾಪದ್ದು ಇವಳು ಗದರಿದಕ್ಕೇ ಹೆದರಿ ಹಾಲು ಕೊಡುತ್ತಿಲ್ಲ ನಾವು ಹೇಗೆ ಜೀವನ ಸಾಗಿಸಬೇಕು ನ್ಯಾಯ ಕೊಡಿ ಎಂದು ದೂರು ನೀಡಿದ್ದಳು ಆದರೆ ಸ್ಥಳಕ್ಕೆ ಹೋಗಿ ಪರಿಶೀಲಿಸಿದರೆ ವಾಸ್ತವ ಸಂಗತಿಯ ಬೇರೆ ಜಾಗದ ವಿಷಯದಲ್ಲಾದ
ಬಿನ್ನ ಅಭಿಪ್ರಾಯಕ್ಕೆ ಈ ದೂರು ಹಸು ನೆಪ ಮಾತ್ರ.ಇದು ಎಷ್ಟು ಸರಿ?
ಇನ್ನೊಂದು ಘಟನೆ ಕೆಲವು ದಿನಗಳ ಹಿಂದೆ ನಡದಿದ್ದು.ಮಹಿಳೆಯೊಬ್ಬಳು ಮದ್ಯವನ್ನು ಸೇವಿಸಿ ಗಂಡ ಹೊಡೆಯುತ್ತಿದ್ದಾನೆ ಸಾರ್ ಎಂದು ಕರೆ ಮಾಡಿದ್ದಳು. ಸ್ಥಳಕ್ಕೆ ತರಲಿ ಗಂಡನನ್ನು ವಿಚಾರಿಸಿದಾಗ ನನ್ನ ಗಂಡನಿಗೆ ಪೊಲೀಸರು ಹೊಡೆದರು ನನ್ನ ಮೇಲೆ ಅತ್ಯಾಚಾರ ಮಾಡಲು ಬರುತ್ತಿದ್ದಾರೆ ಎಂದು ಆರೋಪವನ್ನು ಮಾಡುತ್ತಾಳೆ ಮರುದಿನ ವಿಚಾರಣೆ ನಡೆಸಿದಾಗ ಯಾವುದೂ ನೆನಪಿರುವುದಿಲ್ಲ ಇಂತಹ ಪ್ರಕರಣಗಳಲ್ಲಿ ನಾವು ಏನು ಮಾಡಬೇಕು?
ಧರ್ಮಸ್ಥಳ ಪವಿತ್ರ ಕ್ಷೇತ್ರ:18-20 ವಯೋಮಾನದವರೆ ಹೆಚ್ಚು.
ಇಂದಿನ ಆಧುನಿಕ ವಿದುನ್ಮಾನದಲ್ಲಿ ಹದಿಹರೆಯದ ಯುವಕ ಯುವತಿಯರು ಪ್ರೀತಿಸಿ ಮನೆಮಠ ಎಲ್ಲವನ್ನು ತೊರೆದು ಮದುವೆಯಾಗಲು ಓಡಿ ಬರುತ್ತಾರೆ. ಹೆಣ್ಣು ಹೆತ್ತವರು ಬಿಡಬೇಕೇ ಅಯ್ಯೋ ಸ್ವಾಮಿ ನಮ್ಮ ಹುಡುಗಿ ಕಾಣೆಯಾಗಿದ್ದಾಳೆ. ಯಾರು ಮುಟ್ಟಾಳ ತಲೆಯನ್ನು ಕೆಡಿಸಿದ್ದಾನೆ ಯಾರೂ ಅಪಹರಿಸಿ ಬಿಟ್ಟಿದ್ದಾರೆ ಎಂದು ಕಂಪ್ಲೇಂಟ್ ನೀಡುತ್ತಾರೆ ಹುಡುಗಿಯನ್ನು ಹುಡುಕಿ ಸ್ವತಹ ಹೆತ್ತ ಮಗಳೇ ನಾನು ಇವನನ್ನೇ ಮದುವೆಯಾಗುತ್ತೇನೆ ನನಗೆ 20 ದಾಟಿದೆ ನನ್ನಿಷ್ಟ ಎಂದರೂ. ಹೂಂ ಹೂಂ ಹೆತ್ತವರು ಕೇಳ್ಬೇಕೆ? ಮತ್ತೆ ಶ್ರೀ ಕ್ಷೇತ್ರವು ಪುಣ್ಯಕ್ಷೇತ್ರವಾದ ಕಾರಣ ನನಗೆ ಇಲ್ಲಿ ಮರಣ ಹೊಂದಿದರೆ ಸದ್ದಗತಿ ಹೊಂದಿ ಮಂಜುನಾಥ ಸ್ವಾಮಿಯ ಕೃಪಾಕಟಾಕ್ಷ ದೊರೆಯುತ್ತದೆ. ಎಂಬ ಮೂಡನಂಬಿಕೆಯ ಅಥವಾ ಬಲವಾದ ನಂಬಿಕೆಯ ಮೇಲೆ ಜನರು ಬಂದಿರುತ್ತಾರೆ ಎಷ್ಟೋ ಬಾರಿ ಅಂಥವರ ಜೀವ ಉಳಿಸಿದ ಪ್ರಕರಣಗಳು ಇವೆ. ದಯವಿಟ್ಟು ಈ ರೀತಿ ಮಾಡಿ ಭಕ್ತಾದಿಗಳಿಗೆ ತೊಂದರೆ ನೀಡಬೇಡಿ.
ಎಲ್ಲಾ ಸಮಯದಲ್ಲೂ ಕಾನೂನನ್ನು ಪಾಲಿಸಲು ಸಾಧ್ಯವೇ?
ಕೆಲವೊಮ್ಮೆ ಪೊಲೀಸರು ಸಿದ್ದಾಂತಗಳನ್ನು ಮರೆಯಬೇಕಾದ ಅನಿವಾರ್ಯತೆ ಎದುರಾಗುತ್ತದೆ. ಮಧ್ಯರಾತ್ರಿ 3 ಮತ್ತು ಮಕ್ಕಳನ್ನು ಮಹಿಳಾ ಸಿಬ್ಬಂದಿ ಗಳಿಲ್ಲದೆ ಬಂಧಿಸುವಂತಿಲ್ಲ ಆತ್ಮಹತ್ಯೆಯನ್ನು ಮಾಡಿಕೊಳ್ಳಲು ಬಂದವರು ಅಕಸ್ಮಾತ್ ಪಾಶಾನವನ್ನು ಸೇವಿಸಿದ್ದೇರೆ. ಬಂಧಿಸಿದ ಕೆಲವು ಗಂಟೆಗಳಲ್ಲಿ ಮರಣವನ್ನು ಅಪ್ಪಿದರೆ ಅದರ ಹೊಣೆ ಪೊಲೀಸರ ಎಫ್.ಐಆರ್ ಶೀಟಿಗೆ ಸೇರುತ್ತದೆ ಪೋಕ್ಸೋ ಕಾಯ್ದೆ ಇಡಿ ಸಂಬಂಧಪಟ್ಟವರಿಗೆ ವಿಷಯವನ್ನು ತಲುಪಿಸದೆ ಬಾಲಕಿಯರನ್ನು ಚಿಕ್ಕ ಮಕ್ಕಳನ್ನು ಎಳೆಗೂಸುಗಳನ್ನು ಬಂಧಿಸುವಂತಿಲ್ಲ ಆದರೆ ಪಾಲಕರ ನಿರ್ಲಕ್ಷ್ಯಕ್ಕೆ ಒಳಗಾದ ಮಗುವಿನ ಜೀವನವನ್ನು ಉಳಿಸುವುದು ಕನಿಷ್ಠಪಕ್ಷ ನಮ್ಮ ಕರ್ತವ್ಯ ಕೆ ಎಸ್ ಫೈಲ್ ಮಾಡಿ ಸಂಬಂಧ ಪಟ್ಟವರಿಗೆ ಮಾಹಿತಿ ತಲುಪಿಸಿ ಬಂಧಿಸುವದರೊಳಗೆ ಜೀವ ಹೋಗುವ ಸಂಭವನೀಯತೆಗಳು ಹೆಚ್ಚು.
ನಮ್ಮ ಠಾಣೆಗೆ 18 ಗ್ರಾಮಗಳ ಜವಾಬ್ದಾರಿ ಇದ್ದು 30 ರಿಂದ 40 ಸಿಬ್ಬಂದಿಗಳಿದ್ದಾರೆ ಒಂದು ದಿನಕ್ಕೆ 100 ರಿಂದ 150 ಕರೆಗಳನ್ನು ಸ್ವೀಕರಿಸಬೇಕಾಗುತ್ತದೆ. ಇತರರಂತೆ ನಮ್ಮ ಸೇವೆಗೆ ನಿರ್ದಿಷ್ಟವಾದ ಕಾಲಮಿತಿ ಇಲ್ಲ ಸದಾ ಸಕ್ರಿಯವಾಗಿ ಪಾದರಸದಂತೆ ಚುರುಕಾಗಿದ್ದು ಗಡಿಯಾರದಂತೆ ಕಾರ್ಯನಿರ್ವಹಿಸಬೇಕು ನಿದ್ದೆ ಮಾಡಲು ಸಾಕಷ್ಟು ಕಾಲಾವಕಾಶ ಸಿಕ್ಕರು ತೃಪ್ತಿ ಇಲ್ಲದ ನಿದ್ದೆ ಇತ್ತು ಏನು ಪ್ರಯೋಜನ?
ಕರಾವಳಿ ಜನರು ಬುದ್ಧಿವಂತರು ಸಂವಿಧಾನ ಕಾನೂನಿನ ಕುರಿತು ಅರಿತವರು ಅದನ್ನು ದುರ್ಬಳಕೆ ಮಾಡದೆ ಚಿಕ್ಕ ಪುಟ್ಟ ವಿಷಯಗಳಲ್ಲಿ ಪೊಲೀಸರು ಮೂಗು ತೂರಿಸುವಂತೆ ಮಾಡುವುದು ಒಂದು ಅಪರಾಧ ಅಲ್ಲವೇ? ಸರ್ಕಾರದ ಸಂಬಳವನ್ನು ಪಡೆಯುವ ನಮಗೆ ಜನರ ಸೇವೆ ಮಾಡಲು ಸಿಕ್ಕಿರುವುದು ಪುಣ್ಯ ನಿಮ್ಮ ಸಂರಕ್ಷಣೆಗೆ ನಾವು ಸದಾ ಸಿದ್ದ ಎನ್ನುತ್ತಾರೆ ಠಾಣ ಎಸ್ ಐ ಅನಿಲ್ ಕುಮಾರ್ ಡಿ.
ಸಂಗ್ರಹ: ಕದಂಬ ಸಂಪಾದಕೀಯ ಮಂಡಳಿ










