ಎಷ್ಟು ಕಾಲ ಕಳೆದರು ಮರೆಯಲಾಗದ ಮುಖ ನಿನ್ನದು. ಅದು ಹೇಗೆ ನಿನ್ನ ಪರಿಚಯ ನನಗಾಯ್ತು ಗೊತ್ತಿಲ್ಲ. ಆದರೆ ಆ ದಿನಗಳು ಸುಂದರವಾಗಿತ್ತು. ನೀನು ನನ್ನೊಂದಿಗೆ ಇದ್ದಾಗ ಯಾಕೋ ನೀನೇ ನನಗೆಲ್ಲ ಎಂದು ಭಾವಿಸಿದೆ. ಅಂದಿನ ದಿನಗಳು ಮಧುರವಾದ ಜೇನಿನಂತೆ ಸಿಹಿಯಾಗಿತ್ತು. ಎಂದಿಗೂ ಕಾಲೇಜಿಗೆ ಹೋಗುವ ವೇಳೆ ತಂಗಾಳಿ ಬೀಸಿ ಹೋದಾಗೆ ನೀನು ಹೋಗುವೆ. ಪದಗಳಲ್ಲಿ ವರ್ಣಿಸಲಾಗದಷ್ಟು ಪ್ರೀತಿ ನಮ್ಮದಾಗಿತ್ತು.

ಆದರೆ ಒಂದೇ ಒಂದು ಕ್ಷಣದಲ್ಲಿ ಎಲ್ಲವೂ ಬದಲಾಯಿತು. ಎಂದಿಗೂ ನನ್ನ ಮರೆಯುವುದಿಲ್ಲ ಎಂದ ನೀನು ಇಂದು ಎಲ್ಲಿರುವೆ ಎಂದೇ ತಿಳಿದಿಲ್ಲ. ಈ ಹೃದಯದ ಜಾಗ ಕೇವಲ ನಿನಗಾಗಿ ಕಾದಿದೆ. ನನ್ನ ಬದುಕಿನ ಪ್ರತಿ ಪುಟಗಳಲ್ಲೂ ನಿನ್ನ ಹೆಸರೊಂದೇ ಶಾಶ್ವತ. ಮತ್ತೆ ಮರಳಿ ಬಾ ಮಳೆಯೇ…..
-ಅನಘ ಎಂ.ಡಿ
ಪ್ರಥಮ ಪತ್ರಿಕೋದ್ಯಮ ವಿದ್ಯಾರ್ಥಿನಿ
ಎಸ್.ಡಿ.ಎಂ ಕಾಲೇಜು ಉಜಿರೆ












