ಅಮ್ಮ ಎಂಬ ಎರಡಕ್ಷರದ ಮೌಲ್ಯ

ಕರೆಯುವೆವು ಅಮ್ಮನನ್ನು ಪ್ರೀತಿಯಿಂದ ಮಾತೆ
ಅವಳೇ ನಮ್ಮನ್ನೆಲ್ಲ ಸಾಕಿ ಸಲಹಿಪ ಜನ್ಮದಾತೆ

 

ಮಕ್ಕಳ ಲಾಲನೆ - ಪಾಲನೆ ಮಾಡುವುದೇ ಅವಳಿಗೆ ಸಂತಸ
ಮಕ್ಕಳ ಪ್ರಗತಿಯನೆ ಕಾಣುವಳು ಹಗಲು ರಾತ್ರಿಯಲಿ ಕನಸ

 

ಮಗುವಿನ ತುಂಟಾಟಿಕೆಯಿಂದ ಕುಪಿತಳಾಗುತ್ತಳೆ ಒಮ್ಮೆ
ಮಕ್ಕಳೊಂದಿಗೆಯೇ ಬೆರೆತು ಮಗುವಾಗುಳು ಮಗದೊಮ್ಮೆ

 

ತನ್ನ ಕನಸಿನ ಅರಮನೆಯಲಿ ಮಕ್ಕಳನು  ಬೆಳೆಸುವ ಕೊಂಚ ಆಸೆ
ಅವ್ವನ ಕನಸನು ನನಸಾಗಿಸುವುದೇ ಮಕ್ಕಳ ಮನದಾಸೆ

 

ತನ್ನೆಲ್ಲ ಕಷ್ಟವನು ಮರೆತು ಎಲ್ಲರೊಳು ಬೆರೆಯುವಳು
ಒಗ್ಗಟ್ಟಿನಿಂದಿರಳು ಎಲ್ಲರನು ಹಾರೈಸುವಳು

 

ಬೆಳದಿಂಗಳ ಅಂಗಳದಿ ನೀಡುವಳು  ಪ್ರೀತಿಯ ಕೈ ತುತ್ತು
ಆ ಸವಿಯ ಸ್ವಾದಿಸಿ ಮಕ್ಕಳ ಮೊಗದಿ ಮೂಡುವುದು ಸುಂದರ ಸಿಹಿಮುತ್ತು

 

ತಪ್ಪೊಪ್ಪುಗಳ ತಿದ್ದುಪಡಿಸಿದ ಕ್ಷಮಯಾಧರಿತ್ರಿ
ಜಗದಲಿ ನೀಯೋಬ್ಬಳೆ ಕಾರುಣ್ಯ ಮೈತ್ರಿ 

 

ನೀ ದೇವ - ದೇವತೆಗಳಿಗಿಂತ ಶ್ರೇಷ್ಠ
ನೀ ನಿಲ್ಲದ ಬದುಕು ಊಹಿಸುವುದು ಕಷ್ಟ

 

ಅಮ್ಮ ಎಂದರೆ ಕಣ್ಣಿಗೆ ಕಾಣುವ ನಿಜವಾದ ದೇವರು 
ಅವರನು ತಾಯಿಯಾಗಿ ಕಾಣುವ ನಾವೇ ಧನ್ಯರು

 

ಅಮ್ಮ ಎಂಬ ಎರಡಕ್ಷರದ ಸ್ವರ
ಅದ ಉಚ್ಚರಿಸುವ ಅವಕಾಶವೇ ದೇವರು ಕೊಟ್ಟ ವರ

 

ಅಮ್ಮ ನಾನಿನಗೆಂದೆ ಬರೆದ ವಿಶೇಷ ಲೇಖನ ಈ ಬಾರಿ
ನಾ ನಿನ್ನ ಪ್ರೀತಿಗೆ ಎಂದೆಂದಿಗೂ ಆಬಾರಿ

 

- ಪ್ರಿಯ ದೇವಾಡಿಗ
ನಾರಾವಿ.