ವಿಶ್ವ ಪರಿಸರ ದಿನ🌍🌱

 

 ಯುದ್ಧ ಅಂದ ತಕ್ಷಣ ನಮಗೆ ನೆನಪಾಗೋದು ಜೀವಹಾನಿ, ಮುರಿದು ಬಿದ್ದ ಮನೆಗಳು ಮತ್ತು ಆರ್ಥಿಕ ನಷ್ಟ. ಆದ್ರೆ ಇತ್ತೀಚಿನ ದಿನಗಳಲ್ಲಿ ನಡೀತಿರೋ ಯುದ್ಧಗಳು ನಮ್ಮ ಕಣ್ಣಿಗೆ ಕಾಣದಂತೆ ಪರಿಸರಕ್ಕೆ ಮಾಡ್ತಿರೋ ಹಾನಿ ಅಷ್ಟಿಷ್ಟಲ್ಲ. ಹೌದು, ಬಾಂಬ್ ಬ್ಲಾಸ್ಟ್‌ಗಳು ಬರೀ ಮನುಷ್ಯರನ್ನಷ್ಟೇ ಅಲ್ಲ, ನಾವು ಉಸಿರಾಡೋ ಗಾಳಿ, ಕುಡಿಯೋ ನೀರು ಮತ್ತು ನಮ್ಮ ಭೂಮಿಯನ್ನೂ ಕೊಲ್ಲುತ್ತಿವೆ.

ಇತ್ತೀಚಿನ ಯುದ್ಧಗಳಲ್ಲಿ ಬಳಸ್ತ ಇರೋ ಹೆವಿ ವೆಪನ್‌ಗಳು ಮತ್ತು ಕೆಮಿಕಲ್‌ಗಳಿಂದಾಗಿ ಟನ್‌ಗಟ್ಟಲೆ ಕಾರ್ಬನ್ ಡೈಆಕ್ಸೈಡ್ ವಾತಾವರಣ ಸೇರಿ ಗ್ಲೋಬಲ್ ವಾರ್ಮಿಂಗ್ ಇನ್ನು ಜಾಸ್ತಿ ಆಗ್ತಿದೆ. ಕ್ಷಿಪಣಿಗಳು ಬಿದ್ದ ಜಾಗದಲ್ಲಿ ಮಣ್ಣಿನ ಫಲವತ್ತತೆ ಪೂರ್ತಿ ನಾಶವಾಗಿ, ಅಲ್ಲಿ ಮತ್ತೆ ಗಿಡ-ಮರ ಬೆಳೆಯೋಕೆ ವರ್ಷಗಳೇ ಬೇಕಾಗುತ್ತೆ. ಇನ್ನು ಯುದ್ಧದ ಜಾಗದಲ್ಲಿರೋ ಫ್ಯಾಕ್ಟರಿಗಳು, ಆಯಿಲ್ ಡಿಪೋಗಳಿಗೆ ಬೆಂಕಿ ಬಿದ್ದಾಗ ಆ ವಿಷಕಾರಿ ಹೊಗೆ ಗಾಳಿಯನ್ನ ಪೂರ್ತಿ ಕಲುಷಿತಗೊಳಿಸುತ್ತೆ. ಆ ಕೆಮಿಕಲ್‌ಗಳು ಹತ್ತಿರದ ನದಿ, ಕೆರೆಗಳನ್ನು ಸೇರಿ ಇಡೀ ಜಲಚರಗಳನ್ನೇ ನಾಶ ಮಾಡ್ತಿವೆ.

ಪರಿಸರಕ್ಕೆ ಗಡಿಗಳಿಲ್ಲ. ಒಂದು ಕಡೆ ಆಗೋ ಪರಿಸರ ಹಾನಿಯ ಎಫೆಕ್ಟ್ ಇಡೀ ಜಗತ್ತಿನ ಮೇಲೆ ಆಗುತ್ತೆ. ಹಾಗಾಗಿ, ಯುದ್ಧ ನಿಲ್ಲಿಸೋದು ಬರೀ ಮನುಷ್ಯರ ನೆಮ್ಮದಿಗೆ ಮಾತ್ರವಲ್ಲ, ನಮ್ಮ ಭೂಮಿಯ ಉಳಿವಿಗೂ ಇವತ್ತು ಅನಿವಾರ್ಯವಾಗಿದೆ.

 "ಪ್ರಕೃತಿ ನಮ್ಮ ಅಗತ್ಯಗಳನ್ನು ಪೂರೈಸಬಲ್ಲದೇ ಹೊರತು, ನಮ್ಮ ದುರಾಶೆಯನ್ನಲ್ಲ. ಮುಂದಿನ ಪೀಳಿಗೆಗಾಗಿ ಈ ಭೂಮಿಯನ್ನು ಉಳಿಸುವುದು ನಮ್ಮೆಲ್ಲರ ಕರ್ತವ್ಯ."

 ವಿಶ್ವ ಪರಿಸರ ದಿನದ ಹಾರ್ದಿಕ ಶುಭಾಶಯಗಳು! 🌍🌱