" ಹೆಸರು ದೊಡ್ಡದಾಗುವುದಕ್ಕಿಂತ, ಕೆಲಸ ದೊಡ್ಡದಾಗಿರಬೇಕು."-- ರವಿ ಕಟಪಾಡಿ...

ರಕ್ಷಿತಾ ಹೆಚ್. ಗೋಪಾಲ್ 
ಕೊಡಚಾದ್ರಿ ( ಸಂಪೆಕಟ್ಟೆ )
ಪತ್ರಿಕೋದ್ಯಮ ವಿದ್ಯಾರ್ಥಿ


ರವಿ ಕಟಪಾಡಿ ಎಂದಾಗ ನೆನಪಾಗುದೇ ಉಡುಪಿ. ಅಲ್ಲಿ ನೆಡೆಯುವ ಪತ್ರಿ ಉತ್ಸವಗಳಲ್ಲಿ ರವಿ ಕಟಪಾಡಿ ಯವರು ವಿವಿಧ ಜೀವಿಗಳಂತೆ ವೇಷ ಧರಿಸಿ ಅಗತ್ಯವಿರುವ ಹಣವನ್ನು ಸಂಗ್ರಹಿಸಿ ಅದನ್ನು ಅರೋಗ್ಯ ಸೇವೆ ಗಾಗಿ ಮೀ ಸಲಿರಿಸುತಿದಾರೆ. ಅವರ ಉದ್ದೇಶ ಅರೋಗ್ಯ ದಿಂದ ಬಳಲುತಿರುವರಿಗೆ ಅಗತ್ಯ ವಾಗಿ ಧನ ಸಹಾಯ ಮಾಡುವುದು ಅವರ ಒಂದು ಕನಸು ಮತ್ತು ಮುಖ್ಯ ಕರ್ತವ್ಯ ವಾಗಿಸಿಕೊಂಡಿದರೆ.

ಒಬ್ಬ ಸಾಮಾನ್ಯ ವ್ಯಕ್ತಿ ಮತ್ತು ಸಮಾಜ ಸೇವಕನಾಗಿ  ಜನರ ಹಿತಕ್ಕಾಗಿ ದುಡಿಯುತ್ತಿದ್ದಾರೆ. ಇದು ಒಂದು ಶ್ಲಾಘನೀಯ  ವಿಷಯ. ಕೆಲವರು ಇವರ ಬಗ್ಗೆ ಅಪಪ್ರಚಾರದ ಮಾತನಾಡುವವರು ಇದ್ದಾರೆ. ಹಾಗೆ ಸಂಗ್ರಹಿಸುವ ಹಣವನ್ನು ಅವರು ಸ್ವಂತಕ್ಕೆ ಬಳಸುತ್ತಾರೆ ಎಂದು ಅಂದುಕೊಂಡಿರುವ ಕೆಲವರು ಅದು ನಿಜವಾಗಿಯೂ ತಪ್ಪು ಅದಕ್ಕೆ ಪ್ರತಿಯಾಗಿ ರವಿ ಕಟಪಾಡಿ ಯವರೇ ಸ್ವತಹವಾಗಿ ತಿಳಿಸಿದ್ದಾರೆ. ಸಂಗ್ರಹಿಸುವ ಹಣವನ್ನು ನಾವು ತೆಗೆದುಕೊಳ್ಳುವುದಿಲ್ಲ. ಬದಲಾಗಿ ಅದನ್ನು ನೇರವಾಗಿ ಅಗತ್ಯವಿರುವವರಿಗೆ ಸಂಪನ್ಮೂಲ ವ್ಯಕ್ತಿಗಳ ಸಮ್ಮುಖದಲ್ಲಿ ಅವರಿಗೆ ಅದನ್ನು ಹಸ್ತಾಂತರಿಸುತ್ತೇವೆ ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ.

ADVT.

ರವಿ ಕಟಪಾಡಿಯವರು ಕರ್ನಾಟಕದ ಉಡುಪಿ ಜಿಲ್ಲೆಯ ಕಟಪಾಡಿಯಲ್ಲಿ ಜನಿಸಿದರು. ಇವರು ತಮ್ಮ ಸ್ವಂತ ಜೀವನದಲ್ಲಿ  ಅನೇಕ ಕಷ್ಟಗಳನ್ನು ಎದುರಿಸಿ ಇತರರ ಕಷ್ಟಗಳಿಗೆ ಸ್ಪಂದಿಸುವ ಗುಣವನ್ನು ಬೆಳೆಸಿಕೊಂಡಿದ್ದಾರೆ ಕುಟುಂಬದ ಆರ್ಥಿಕ ಪರಿಸ್ಥಿತಿಯಿಂದಾಗಿ ಹೆಚ್ಚಿನ ಶಿಕ್ಷಣ ಪಡೆಯಲು ಅವರಿಗೆ ಸಾಧ್ಯವಾಗಲಿಲ್ಲ. ಜೀವನ ನಿರ್ವಹಣೆಗಾಗಿ  ಕಟ್ಟಡ ನಿರ್ಮಾಣ ಕೆಲಸಗಳನ್ನು ತಮ್ಮನ್ನು ತೊಡಗಿಸಿಕೊಂಡಿದ್ದರು. ಇವರು  2013 ರಲ್ಲಿ ಸಮಾಜ ಸೇವೆಯನ್ನು ಪ್ರಾರಂಭಿಸಿದರು. ಶ್ರೀ ಕೃಷ್ಣ ಜನ್ಮಾಷ್ಟಮಿಯ ಸಂದರ್ಭದಲ್ಲಿ ವಿಶೇಷ ವೇಷವನ್ನು ಧರಿಸಿ ಹಣ ಸಂಗ್ರಹಿಸಲು ಆರಂಭಿಸಿದರು.

2026 ರಲ್ಲಿ ನಡೆದ ಶ್ರೀ ಕೃಷ್ಣ ಜನ್ಮಾಷ್ಟಮಿ ಯಲ್ಲಿ ವೇಷಧರಿಸಿದ ಅವರು ಸುಮಾರು 41,82,935 ರಷ್ಟು ಗಳಿಸಿದ್ದಾರೆ. ಅದನ್ನು 14 ಮಕ್ಕಳಿಗೆ ನೀಡುವುದಾಗಿ ಹೇಳಿದ ಅವರು ರವಿ ಫ್ರೆಂಡ್ಸ್ ಕಟಪಾಡಿ  ನೇತೃತ್ವದಲ್ಲಿ  ಅಕ್ಟೋಬರ್ 30 , 2026ರಂದು ಶ್ರೀ ಪೇಟೆ ಪೇಟೆಬೆಟ್ಟು ಬಬ್ಬು ಸ್ವಾಮಿ ಕೊರಗಜ್ಜ ದೇವಸ್ಥಾನದಲ್ಲಿ ಅದರ ಕಾರ್ಯಕ್ರಮವನ್ನು ಹಮ್ಮಿಕೊಂಡು ಅಗತ್ಯವಾಗಿ ದೊರೆತ ಹಣವನ್ನು ಅನಾರೋಗ್ಯ ಪೀಡಿತ ಪುಟಾಣಿ ಮಕ್ಕಳಿಗೆ ಹಸ್ತಾಂತರಿಸಲಾಯಿತು.

ಇಂಥ ಒಬ್ಬರು ವ್ಯಕ್ತಿನ್ನು ನಮ್ಮ ಸಮಾಜದಲ್ಲಿ  ನೋಡಲು ಹೆಮ್ಮೆಯ ವಿಚಾರ ಅವರ ವೈಯಕ್ತಿಕ ಜೀವನವನ್ನು ಮಕ್ಕಳ ಬದುಕಿಗಾಗಿ ಪಣವಾಗಿರಿಸಿ ಶ್ರಮಿಸುತ್ತಿರುವುದು ಒಂದು ವಿಸ್ಮಯ ಸಂಗತಿ. ಎಲ್ಲಿ ಹುಡುಕಿದರೂ ಇಂತಹ ವ್ಯಕ್ತಿಯನ್ನು ನೋಡಲು ಸಾಧ್ಯವಿಲ್ಲ  ಏಕೆಂದರೆ ಯಾರು ಸಹ ಇಂತಹ ಸಾಹಸಕ್ಕೆ ಕೈ ಹಾಕುವುದಿಲ್ಲ. ಯಾರಿಗೆ ಏನು ಆದ್ರೆ ನಮಗೆ  ಏನು ಎನ್ನುವ ಈ ಕಾಲದಲ್ಲಿ ಅದನ್ನು ಒಂದು ಸೇವೆಯ ರೀತಿಯಲ್ಲಿ ನಡೆಸಿಕೊಂಡು ಬರುತ್ತಿರುವವರು ರವಿ ಕಟಪಾಡಿ ಸರ್. ಇವರನ್ನು ನಾನು ನೋಡಿಲ್ಲ ಆದರೆ ಇವರ ಬಗ್ಗೆ ಕೇಳಿದ್ದೇನೆ ಇವರ ಒಂದು ಜೀವನ ಚರಿತ್ರೆಯನ್ನು ಓದಿದೆ ಆ ಸಂದರ್ಭದಲ್ಲಿ ತಿಳಿದಿದ್ದು. ಈ ಕಲಿಯುಗದ ಕರ್ಣನೆಂದೆ ಪ್ರೀತಿಯಿಂದ  ಇವರನ್ನು ಕರೆಯುತ್ತಾರೆ. ಇವರು ಸಹ ಎಲ್ಲರಂತೆ ಸಾಮಾನ್ಯರೇ ಅವರಲ್ಲಿರುವ ಸಹಾಯ ಮಾಡುವ ಗುಣ ಎಲ್ಲರಲ್ಲಿಯೂ ಬರುವುದಿಲ್ಲ. ಭಾರವಾದ ವೇಷ ಅನಾರೋಗ್ಯಕರವಾದ ಬಣ್ಣಗಳ ಬಳಕೆ, ಇದರಿಂದಾಗಿ ಅವರ ಆರೋಗ್ಯದ ಮೇಲೂ ಪರಿಣಾಮ ಬೀರಿ ಒಂದು ವರ್ಷ ವೇಷ ಧರಿಸುವುದನ್ನೆ  ಬಿಟ್ಟಿದ್ದ ರವಿ ಕಟಪಾಡಿಯವರು 2026 ರಲ್ಲಿ ಮತ್ತೊಮ್ಮೆ ವೇಷಧರಿಸಿ ಅಗತ್ಯ ಹಣ ನೆರವಿಗಾಗಿ ಶ್ರಮಿಸಿದರು. 1 ಕೋಟಿ 26 ಲಕ್ಷಗಳನ್ನು  ಇದು ವರೆಗೂ ಸಂಗ್ರಹಿಸಿ ಅದನ್ನು ಸಹಾಯಧನವಾಗಿ ನೀಡಿದ್ದಾರೆ.

ADVT.

ಇವರು ತುಳುನಾಡಿನ ಮನ ಮನಗಳಲ್ಲಿ  ಮನೆ ಮಾತಾಗಿದ್ದಾರೆ. ಮುಂದೆಯೂ  ಸಮಾಜ ಸೇವೆಯಲ್ಲಿ ಮುಂದುವರೆಯುವುದಾಗಿ ಹೇಳಿದ ರವಿ ಕಟಪಾಡಿಯವರಿಗೆ ಎಲ್ಲರೂ ಸಹಕರಿಸಿ ಅದರೊಂದಿಗೆ ಸದಾ ಕಾಲ ದೇವರು ಅವರನ್ನು ರಕ್ಷಿಸಲಿ ಎನ್ನುವುದು ಒಂದು ನನ್ನ ಸಣ್ಣ ಕೋರಿಕೆ..