ಅಂಜುವಿಕೆ ಎನ್ನುವುದು ಒಂದು ಮಗು ಈ ಪ್ರಪಂಚಕ್ಕೆ ಕಾಲಿಟ್ಟಾಗಿನಿಂದ ಆರಂಭವಾಗುವಂತ ಸನ್ನಿವೇಶ ಅಂತ ಹೇಳಬಹುದು. ಅದು ಯಾರಿಂದ ಅಂತ ನೋಡಿದರೆ ಮೊದದಲ ಸ್ಥಾನ ಅಮ್ಮನಿಗೆ ಸಲ್ಲುತ್ತದೆ ಏಕೆಂದರೆ ಅವಳ ಒಂದು ಮಾತು “ಗುಮ್ಮ ಬರುತ್ತದೆ, ಬೇಗ ಊಟ ಮಾಡು”

ಇಲ್ಲಿಂದ ಶುರುವಾದ ಹೆದರಿಕೆ ಜೀವನದ ಉದ್ದಕ್ಕೂ ಸಾಗುತ್ತದೆ. ಆಡುವಾಗ, ಆಡು ಮಗ ಜಗೃತೆ ಅನ್ನುವ ಬದಲು ಬೇಡ ಮಗ ಬೀಳ್ತಿ ಅನ್ನುವವರೆ ಜಾಸ್ತಿ. ಬಿದ್ದಾಗ ಬಂದು ಏಳಿಸುವ ಜನರಿಗಿಂತ ನಗುವ ಜನರೆ ಜಾಸ್ತಿ. ಹಾಗಾಗಿ ಬಿದ್ದಾಗ ಆಗುವ ನೋವಿಗಿಂತ ಯಾರು ನಗುತ್ತಾರೆ ಎಂಬ ಆತಂಕವೇ ಹೆಚ್ಚು. ಹೀಗೆ ಅಂಜಿಕೆ ಎಳೆಯ ಪ್ರಾಯದಿಂದಿಡಿದು ಸದಾ ನಮ್ಮೊಂದಿಗಿರುತ್ತದೆ. ಇದೇ ಸಮಯದಲ್ಲಿ ಎಚ್ಚೆತ್ತುಕೊಂಡವರು ಒಂದು ಹಂತದಲ್ಲಿ ಚಲಿಸುತ್ತಾರೆ ಇಲ್ಲವಾದಲ್ಲಿ ಹೋರಾಡಬೇಕಾಗುತ್ತದೆ.
ಹೀಗೆ ಒಂದು ಊರಲ್ಲಿ ಅಂಜಲಿ ಅನ್ನುವ ಹುಡುಗಿ ಇರುತ್ತಾಳೆ. ಅಷ್ಟೇನು ಸಿಂಪಲ್ ಹುಡುಗಿ ಅಲ್ಲ ಯಾವಗ್ಲೂ ಬಿಂದಾಸ್ ಆಗಿರಬೇಕು ಅನ್ನೊದು ಆಶಯ. ಸಣ್ಣದಿಂದಲು ಚೂಟಿ ಮತ್ತು ಸಾದು ಹುಡುಗಿಯೇನಲ್ಲ ಒಂತರ ಗಂಡುಬೀರಿ ಅಂತ ಹೇಳ್ಬೊದು. ಅಂಜಲಿ ಯಾವ ವಿಷಯಕ್ಕೂ ಹೆಚ್ಚಾಗಿ ತಲೆ ಕೆಡಿಸುವವಳಲ್ಲ ಆದರೆ ಕೆಲವು ಸಂಗತಿಗಳಲ್ಲಿ ಆಕೆ ಅತಿಯಾಗಿ ನಂಬಿ ಮೋಸ ಹೋದಲ್ಲಿ ಈ ಅಂಜಿಕೆ ಅನ್ನುವುದು ಆಳವಾಗಿ ಅವಿತುಕೊಂಡಿರುತ್ತದೆ. ಅದರಲ್ಲಿ ಮೊದಲನೇ ಸ್ಥಾನ ಅವಳಿಗಾಗಿರುವ ಪ್ರೀತಿಯ ವಿಷಯವಾಗಿರುತ್ತದೆ. ಒಂದು ವಯಸ್ಸಿನಲ್ಲಿ ಆಗುವ ಮತ್ತು ಮಾಡುವ ಸಾಮಾನ್ಯ ತಪ್ಪುಗಳಲ್ಲಿ ಪ್ರೀತಿಯು ಒಂದು. ಅವಳು ಸುಮಾರು ೪ಜನರನ್ನು ಪ್ರೀತಿಸಿರುತ್ತಾಳೆ ಆದರೆ ಅಷ್ಟು ಜನರನ್ನು ಬಿಡಲು ಕಾರಣ ಒಂದೆ ಅದು ಮೋಸ. ಅಂದರೆ, ಪ್ರತಿ ಬಾರಿ ಈ ಪ್ರೀತಿ ನಿಜ ಇದರಲ್ಲಿ ಯಾವುದೆ ಮೋಸ ಇಲ್ಲ ಎಂದು ಅಂದುಕೊಂಡಾಗೆಲ್ಲ ಅವಳು ಕೆಟ್ಟಿದ್ದಾಳೆ. ಆ ಹುಡುಗರೆಲ್ಲ ಅಂಜಲಿಯನ್ನು ಪ್ರೀತಿಸುವುದರ ಜೊತೆಗೆ ಬೇರೆಯವರೊಂದಿಗೆ ಹಾಗೆ ಇರುವುದನ್ನು ಸಹಿಸಲಾಗದೆ ಬಿಟ್ಟಿರುತ್ತಾಳೆ.
ಈಗ ಅವಳ ಸ್ತಿತಿ ಹೇಗೆ ಇದೆ ಅಂದರೆ ಒಬ್ಬ ನಿಜವಾಗಿಯು ನಿಷ್ಕಲ್ಮಶವಾಗಿ ಪ್ರೀತಿಸುತ್ತೇನೆಂದು ಬಂದರು ಅದನ್ನು ಒಪ್ಪಲಾಗದಂತಹ ಸ್ತಿತಿ ಅವಳದ್ದಾಗಿದೆ. ಇದು ಒಂದು ರೀತಿಯ ಅಂಜಿಕೆಯಾದರೆ,…….
ಇನ್ನೊಂದು ಕಡೆ ಮೇಘ ಅನ್ನುವ ಹುಡುಗಿ. ಅವಳಿಗೆ ನಾಟಕ ಅಂದರೆ ಅಚ್ಚುಮೆಚ್ಚು. ಕಲಾ ಮಾತೆಗೆ ಹುಟ್ಟಿದಂತೆ ಸದಾ ಅವರ ಸೇವೆ ಮಾಡುವುದರಲ್ಲಿ ನಿರತಲಾಗಿರುತ್ತಾಳೆ. ಅದೆಷ್ಟೆ ತಡವಾದರು ವೀಕ್ಷಕರ ಮನ ಸೆಳೆಯುವಂತೆ ಪ್ರದರ್ಶನ ನೀಡುತ್ತಿದ್ದಳು. ಆದರೆ ಇವಳ ಅಂಜಿಕೇನಂದರೆ ನೆರೆ ಹೊರೆಯವರೆ ತುಂಬಾ ಕೆಟ್ಟದಾಗಿ ಬಿಂಬಿಸುತ್ತಿದ್ದರು. ಮನೆ ಸೇರುವಾಗ ತಡವಾದಲ್ಲಿ ಬೇರೆನೆ ಅರ್ಥ ಕಟ್ಟುತ್ತಿದ್ದರು. ಸ್ವಲ್ಪ ಸಮಯ ಅದನ್ನೆಲ್ಲ ಸಹಿಸಿದರು ಒಂದು ಮಿತಿ ಮೀರಿ ನಡೆದಾಗ ಅವಳ ಮನಸ್ತಿತಿಯ ಗತಿಯೇನು?
ಈಗ ಮೇಘ ನಾಟಕ ಪ್ರದರ್ಶಿಸುವುದನ್ನು ಬಿಟ್ಟು ನಾಲ್ಕು ಗೋಡೆಯ ಪಾಲಾಗಿದ್ದಾಳೆ.
ಹೀಗೆ ಒಂದು ಮೊಳೆ ಗೊಡೆಗೆ ಊರುತ್ತಿದೆ ಎಂದು ಗೊತ್ತಾದಾಗ ಇನ್ನಷ್ಟು ಹೊಡೆದು ಊರಿಸುತ್ತಾರೆ ವಿನಃ ಅಲ್ಲಿಗೆ ನಿಲ್ಲಿಸುವುದಿಲ್ಲ. ಹಾಗೆಯೇ ಈ ಜಗತ್ತು ಕೂಡ ಒಮ್ಮೆ ನಾವು ಇತರರ ಮಾತು ಕೇಳುತ್ತೇವೆ ಎಂದು ಗೊತ್ತಾದ ಕೂಡಲೆ ಮಾತು ಜಾಸ್ತಿಯೇ ಆಗುತ್ತದೆ ವಿನಃ ಕಮ್ಮಿಯಾಗದು. ಒಂದು ಹಂತದ ವರೆಗೆ ಆ ಮಾತುಗಳು ಚೆನ್ನ, ಮತ್ತೆ ಆ ಮಾತುಗಳೆ ಶಾಪವಾದರೆ?… ಇಲ್ಲಿ ಯಾರು ಉತ್ತಮರಲ್ಲ ಅಧಮರು ಅಲ್ಲ, ಎಲ್ಲಾ ಕಾಲಕ್ಕನುಗುಣವಾಗಿರಿತ್ತಾರೆ. ಹಾಗಾಗಿ ಯಾರನ್ನು ಒಂದೆ ಮಾತಿಗೆ ಹೀಗೆ—– ಎಂದು ತೀರ್ಮಾನಿಸಬಾರದು. ಇನ್ನೂ ಗಮನಿಸುವುದಾದರೆ ಯಾರೆ ಒಬ್ಬ ಜ್ಞಾನಿ ಅಥವ ತಿಳುವಳಿಕೆ ಇರುವವರಾದರೆ ಯಾರ ವಿಷಯಕ್ಕೂ ತಲೆ ಹಾಕದೆ ತಮ್ಮ ಕೆಲಸಗಳಲ್ಲಿ ನಿರತರಾಗಿರುತ್ತಾರೆ. ಯಾರೊಬ್ಬ ವ್ಯಕ್ತಿಗೆ ತಾವು ಮಾಡಬೇಕಾದ ಕೆಲಸದ ಬಗ್ಗೆ ಅರಿವಿರುವುದಿಲ್ಲ ಆತ ಇನ್ನೊಬ್ಬರ ವಿಷಯದಲ್ಲಿ ಅಗತ್ಯವಿಲ್ಲದ ಪಾತ್ರವನ್ನು ನಿಭಾಯಿಸಲು ಹೋಗುತ್ತಾನೆ. ಹಾಗಾಗಿ ಅಂತವರ ಮಾತಿಗೆ ಕಿವಿ ಹಾಕದೆ ನಾವು ಮಾಡುವ ಕೆಲಸದ ಮೇಲೆ ವಿಶ್ವಾಸ ಮತ್ತು ನಂಬಿಕೆಯಿದ್ದರೆ ಯಾರಿಗು ಅಂಜದೆ ಧೈರ್ಯದಿಂದ ಜೀವಿಸಬಹುದು. ಈ ಕಲಿಯುಗದಲ್ಲಿ ಒಳ್ಳೆಯವರಿಗಿಂತ ಕೆಟ್ಟವರಿಗೆ ಆಯಸ್ಸು ಜಾಸ್ತಿ ಹಾಗೆಯೆ ಗೆಲುವು ಕೂಡ. ಅಂತಹವರ ಬಗ್ಗೆ ಯೋಚಿಸದೆ ಮುನ್ನುಗುವುದು ಉತ್ತಮ. ಹಾಗಾಗಿ ಯಾರಿಗೂ ಅಂಜಿ ಬದುಕಬೇಕಾಗಿಲ್ಲ.
- ಮಾನ್ಯ
ಉಜಿರೆ