ಉಳಿದ ಮಾತು

ನಿನಗೆ ಹೇಗೆ ಹೇಳಲಿ ?
ನಾನೆಷ್ಟು ಕಾದಿರುವೆ ನಿನಗಾಗಿ ಎಂದು !
ಯಾರ ಅಂತರದ ವಿರಹವಿರದಿದ್ದರು
ವೇದನೆ ಅನುಭವಿಸಿತ್ತು ನನ್ನಂತರಂಗ.
ಕತ್ತಲು ಕೋಣೆಯ ಕಿಟಕಿಗೆ ತಲೆ ಇಟ್ಟು
ಬೆಳದಿಂಗಳ ಚಂದ್ರಮನೊಂದಿಗೆ
ಅದೆಷ್ಟು ಮಾತಿತ್ತೋ?! ನಾನರಿಯೆ,
ಇನ್ನಾಗದು ಎಂದು ಮೋಡಗಳಲ್ಲಿ
ಮರೆಯಾದ ಅವನು ನನ್ನ ಮಾತು ನಿಲ್ಲಿಸಿ.
ಸೊಂಪಾಗಿ ಬೀಸಿದ ಗಾಳಿಯೊಡನೆ ಜೋಗುಳದ
ಹಾಡನ್ನೂ ಹಾಡಿದ್ದನವ ನಿದಿರೆಗೆ ಜಾರಿಸಲು.
ಜೊತೆಯಾಗಿ ಹರಟೆ ಕೇಳಿದ್ದ ಕೋಣೆಯೂ,
ಸ್ತಬ್ಧವಾಗಿತ್ತು ಕ್ಷಣಕಾಲ ನನ್ನ ಮೌನಕ್ಕೆ.
ಅಪರಿಚಿತರು ಹೌದು, ಆದರೆ ಅನುಸರಿಸಿ
ಅನುರಾಗದ ನೂತನ ಶೀರ್ಷಿಕೆಯ ನಿಮ್ಮೊಂದಿಗೆ ಬರೆಯುವುದಾಗಿ ಮನ ಬಯಸಿತ್ತು !

 

-ಶ್ರೀರಕ್ಷಾ ನಾಯ್ಕ
ಧಾರವಾಡ