ಕಷ್ಟದಲ್ಲೂ ತನ್ನ ಕೂಸಿಗಾಗಿ ಹಂಬಲಿಸುವ ಅಮ್ಮ
ಬೆಚ್ಚನೆಯ ಹೊದಿಕೆಯಲ್ಲಿ ಇರುವಾಗ ಸಂತೋಷ ಪಡುವ ಅಮ್ಮ
ಹೊಸ ಕನಸುಗಳನ್ನು ಕಾಣುವ ಅಮ್ಮ
ಬೆಚ್ಚನೆಯ ಹೊಟ್ಟೆಯಿಂದ ಹೊರಗಡೆ ಬಂದಾಗ ಕೇಳುವ ದ್ವನಿಯೇ ಅಮ್ಮ
ಎಷ್ಟೇ ಕಷ್ಟ ಬಂದರು ಮುಖದಲ್ಲಿ ನಗುವನ್ನು ಕಡಿಮೆ ಆಗದೇ ಇರುವ ಅಮ್ಮ
ಮಕ್ಕಳಿಗೆ ತನ್ನ ಜೀವ ಬಿಡುವ ಅಮ್ಮ
ಹಸಿವು ಎಂದಾಗ ಕೈತುತ್ತು ಕೊಡುವ ಅಮ್ಮ
ಚಂದ್ರನಲ್ಲಿ ತನ್ನ ಪುಟ್ಟ ಕೈಯ ಬೆರಳು ತೋರಿಸುವ ಅಮ್ಮ
ಸಾವು ನೋವುಗಳ ನಡುವೆಯಲ್ಲೂ ಭರವಸೆ ಸಾಧಿಸಿದ ಅಮ್ಮ
ಕುಟುಂಬದಲ್ಲಿ ಯಾರ ಬೆಂಬಲ ಇಲ್ಲದಿದ್ದರೂ ಖುಷಿಯಾಗಿ ಜೀವನ ನಡೆಸಿದ ಅಮ್ಮ
ಮಕ್ಕಳ ಮುಖದಲ್ಲಿ ನಗು ತರಿಸುವ ಅಮ್ಮ
ಸಾವಿರಾರು ಕೋಟಿ ಜನುಮ ಬಂದರು ಮರಳಿ ಸಿಕ್ಕುವುದಿಲ್ಲ ಅಮ್ಮ.
-ವೈಷ್ಣವಿ ಪುರಾಣಿಕ್
ಕುಂಭಾಸಿ ಕುಂದಾಪುರ